ಹೀಗೆ ದೀಪಾವಳಿ ಮತ್ತೆ ಚಳಿಯ ಮಾತು…

ನೆನ್ನೆ ಕನ್ನಡ ರಾಜ್ಯೋತ್ಸವ, ಮೊನ್ನೆ ದಸರಾ, ಆಚೆ ಮೊನ್ನೆ ಗೌರಿ ಗಣೇಶ ಹಬ್ಬ, ಇವಾಗ ದೀಪಾವಳಿ; ಆಮೇಲೆ ಕ್ರಿಸ್ಮಸ್ ಮತ್ತೆ ಹೊಸ ವರ್ಷ… ಹಿಂಗೆ ಹೋದ್ರೆ ಲೈಫು ಇಷ್ಟೆನೇ!!! ಅದೆಲ್ಲ ಹಾಗೆ ಇರಲಿ… ಸದ್ಯಕ್ಕೆ ದೀಪಾವಳಿ ಬಗ್ಗೆ ಮಾತಾಡೋಣ… ದೀಪಗಳ ಹಬ್ಬ ಈ ನಮ್ಮ ದೀಪಾವಳಿ… ಮನಸ್ಸಿನ ಕತ್ತಲೆಯನ್ನ ದೂರ ಮಾಡಿ ಜೀವನಕ್ಕೆ ಬೆಳಕು ತರುವುದೇ ಈ ಸಮಯದ ವಿಶೇಷ. 🙂

ಎಲ್ಲ್ ಹೋದ್ರು ಪಟ್ ಪಟಾ ಪಟ್ಟ್, ದಡ್ ದಡಾ ದಡ್ ಅನ್ನುತ್ತಪ್ಪ… ನಾವೇನ್ ಬದುಕಿರಬೇಕೋ ಬೇಡವೋ ಅಂತ!! ಜನ ಎಷ್ಟು ಹೇಳಿದ್ರು ಕೇಳಲ್ಲಪ್ಪ, ಬೇಡ್ರೋ; ಆಕೆಗೆ ಸ್ವಲ್ಪ ಗೌರವ ಕೊಡ್ರೋ, GO GREEN, NO CRACKERS, NO POLLUTION.., ಅಂದ್ರು ಕೇಳಲ್ಲ ಯಾರೂನು… ಛೆ ಛೆ!!

ಹಾಗೆ ಎಲ್ಲ ಹಬ್ಬ ಬಂದ್ರು ಎಲ್ಲರಿಗೂ flashback ಅನ್ನೋದು ಇದ್ದೆ ಇರುತ್ತಲ್ವಾ?? ಹಾಗೆ ನನ್ನ ಸ್ನೇಹಿತನಿಗೂ ನೆನಪಾಗ್ತಾ ಇತ್ತು… ಅದನ್ನೇ ಹೇಳ್ತಾ ಇದ್ದ… Super, Fantastic, Fabulous; ಅಂತಾರಲ್ಲಾ ಹಾಗೆ ಒಂದು beautiful moment ಅಂತಾನೆ ತಿಳ್ಕೋಬಹುದು ಅಂದ!! ಅದನ್ನ ಅವನ ಬಾಯಲ್ಲೇ ಕೇಳೋಣ.

Now Paapu Says, 🙂

“there were some beautiful moments where me n my chota bro used to fire the crackers like mad when we were kids.. 😛 My dad used to get single gun to my brother n crackers to me with bonus amount of 10 rupees each… That time gun rate was 5 rupees… Miss you dad… Miss you so much”. 🙂

ಅವನು ಹೇಳಿದ್ಮೇಲೆ ನನಗೂ ನೆನಪಾಗ್ತಾ ಇತ್ತು… Yes, really missing those days, badly missing those memorable childhood days..:-( ಹೌದು, ಅವೆಲ್ಲಾ ಸುಮಧುರ ಕ್ಷಣಗಳು… ಎಷ್ಟೇ ಸಿರಿವಂತರಾದರು ಅವನ್ನೆಲ್ಲ ವಾಪಸ್ ಪಡಿಲಿಕ್ಕೆ ಹಾಗಲ್ಲ ಅಲ್ವಾ??!! ಹೌದು ಕಣ್ರೀ ಅದರ ಬೆಲೆನೇ ಬೆಲೆ!!

ವಾಸ್ತವಕ್ಕೆ ಬಂದ್ರೆ ಪಟಾಕಿ ಹೊಡೆಯೋದಕ್ಕೆ ಮನಸ್ಸಾಗ್ತಿಲ್ಲ… ಅದು ಯಾಕೋಪ್ಪಾ?? Mostly ಆಕೆ ಮೇಲಿನ ಪ್ರೀತಿ, ಗೌರವವಿರಬೇಕು..:-) ಹೌದು ಭೂಮಿ ತಾಯಿ ಮೇಲಿನ ಗೌರವಾನೆ ಮನಸ್ಸನ್ನ ಈ ಪರಿಗೆ ತಂದು ನಿಲ್ಲಿಸಿದೆ:-)

ಹೋಗ್ಲಿ ಬಿಡಿ, ಸದ್ಯಕ್ಕಂತೂ ತುಂಬಾ ಚಳಿ ಕಣ್ರೀ… ನಿತ್ಯಹರಿದ್ವರ್ಣದಲ್ಲಿ ಕಟ್ಟಿಗೆಗೆ ಬರವೇ ಅನ್ನೋ ಹಾಗೆ ಸಿಲಿಕಾನ್ ಸಿಟಿಯಲ್ಲಿ ಚಳಿಗೇನು ಬರ ಇಲ್ಲ ಗುರು… ಈ ಬಿಸಿಲಲ್ಲೂ ಎಂತ ಚಳಿ ಮಾರಾಯ್ರೆ!! 😉

ಹ ಹ ಆದ್ರು ಒಳ್ಳೆ ಚಳಿ ಗುರು… ಈ ಚಳಿಗೆ ಒಂದು ಬಿಳಿ ಕಿಂಗ್ ಸಿಗೆರೇಟ್ನಾ ಕೆಂಪು ತುಟಿಗೆ ಇಟ್ಟು, ಬೆಂಕಿ ಹಚ್ಚಿ, ಹಂಗೇ ಒಳಗೆ ಹೊಗೆನಾ ಎಳೆದುಕೊಂಡು, ಸುಮ್ನೆ ಹೊಗೆನಾ ಆಚೆ ಕಡೆ ಉಫ್ ಅಂತ ಬಿಡ್ತಾ ಇದ್ರೆ, ಅದ್ರು ಮಜಾನೇ ಬೇರೆ ಗುರು… “A feel that never ends” ಅಂತಾರಲ್ಲ ಹಾಗೆ!! ( ಹೀ ಹೀ ಮಂದಿ ತಪ್ಪಾಗಿ ತಿಳ್ಕೊಂಡರೂ ಅನ್ಸುತ್ತೆ… ಯಪ್ಪಾ I don’t smoke, just an imagination ಅಸ್ಟೆ…)

ಆದ್ರು ಏನ್ ಮಾಡೋದು?? ಕೆಲವೊಂದು ಕ್ಷಣಗಳನ್ನ ಮರೆಯೋದಕ್ಕಾದ್ರು ಪಾಪು ಹೇಳೋ ಹಾಗೆ ಸಿಗರೇಟ್ ಹೊಡಿಬೇಕು ಅನ್ಸುತ್ತೆ… ಅವರಿವರ ದೃಷ್ಟಿಯಲ್ಲಿ ಸಭ್ಯರಾದವರ ಹಣೆಬರಹವನ್ನ ನಾ ನಿಮಗೆ ಹೇಗೆ ವಿವರಿಸಲಿ??!! 😛

ಹೀಗೆ ನೊಂದುಕೊಳ್ತಾ ಚಳಿಯ ಮಜಾ ತಗೊಳ್ತಾ, ಚಳಿ ಚಳಿ ತಾಳೆನು ಈ ಚಳಿಯಾ ಹಾಡು ನೆನಪಾಗ್ತಾ ಇದೆ… ಏನೇ ಅಂದ್ರು ಸಿಕ್ಕಾಪಟ್ಟೆ ಭಯಂಕರ ಚಳಿ ಗುರು… ಒಳ್ಳೆ freezer ಅಲ್ಲಿ ಇರೋ ಅನುಭವ ಆಗ್ತಿದೆ. 🙂

ಚಳಿಯಾಟವೇನೂ ಬಲ್ಲವರು ಯಾರು
ಮುಂದೇನು ಎಂದು ಹೇಳುವವರೂ ಯಾರು??
ಶೀತ, ಈ ಕಾಟ, ಇದೇಕೆ ಇದೇಕೆ??

ಇಂತಿ ನಿಮ್ಮವ;
@ Triple K 🙂

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s