Placement in Life!!

ಪ್ರತಿ ಭಾವನೆಗಳಿಗೂ ಭಾಷ್ಯ ಬರೆಯುವ, ಅದಕ್ಕೊಂದು ಅರ್ಥ ಕಲ್ಪಿಸುವ ನನಗೆ “Placement in Life” ಎಂಬುದಕ್ಕೆ ಒಂದು ನೆಲೆ ಕಂಡುಕೊಳ್ಳಲು ಒದ್ದಾಡುತ್ತಿದ್ದೇನೆ… ಓದಿಕೊಂಡಿರೋದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಹಾಗಂತ ಇಷ್ಟ ಪಟ್ಟು ಮಾಡಿದ್ದೇನು ಅಲ್ಲ; ನಮ್ಮ ಸುತ್ತಲಿನ ಪರಿವಾರಕ್ಕೆ ಮಣಿದು!! ಆದರೂ ಆಸಕ್ತಿ ಮಾತ್ರ ಕಲೆಯ ವಿಚಾರವಾಗಿ… ಅದಕ್ಕೋಸ್ಕರ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಮೊರೆ ಹೊಕ್ಕಿದ್ದೇನೆ… ದೂರ ಶಿಕ್ಷಣದ ವಿಧ್ಯಾರ್ಥಿಯ ದಾರಿಯಲ್ಲಿ!! ಯಾಕಂದ್ರೆ ನನ್ನ ಆಸಕ್ತಿಯನ್ನ ಚಿವುಟಿ ಹಾಕಬಾರದು ಅಂತ ಅಷ್ಟೇ… ಹೌದು ರೀ; ಸಾಹಿತ್ಯ, ಇತಿಹಾಸ, ಛಾಯಾಗ್ರಹಣ ಅಂದ್ರೆ ಏನೋ ಮನಸು ಹಿಗ್ಗಿ ಹಿಗ್ಗಿ ಪ್ರೋತ್ಸಾಹಿಸುತ್ತೆ…. ಅದಕ್ಕೆಂದೇ ಆ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದೀನಿ, ಹಾಗೆ ಮುಂದುವರಿಸುವೆ ಅನ್ನೋ ಆತ್ಮವಿಶ್ವಾಸ ನನ್ನಲ್ಲಿದೆ, the so called Self-Confidence!!

ಆದರೂ ಬದುಕಿಗೆ ನೆಚ್ಚಿಕೊಳ್ಳುವ ದಾರಿ ಯಾವುದೋ ನಾ ಇನ್ನು ಅರಿಯೆ (In gambling state ಅಂತಾರಲ್ಲ ಹಾಗೆ)!!

ಸ್ವಾಭಿಮಾನವೆಂಬ ಸ್ನೇಹಿತನನ್ನ ಮಡಿಲಿನಲ್ಲಿ ಇಟ್ಟುಕೊಂಡು ಎಲ್ಲಾದರೂ ಎಡವುತ್ತಿನೆನೋ ಎಂಬ ಭಯ ಆಗುತ್ತೆ, ಆದರೂ ಇದುವರೆಗೂ ಒಂದು ರೀತಿಯ ಒಳ್ಳೆ ದಾರಿಗಳನ್ನೇ ಕಂಡಿದ್ದೀನಿ, ಹಾಗೆ ಮುಂದುವರೆಸಲು ಸಹಕರಿಸಬೇಕಾಗಿ ಆ ಕಾಣದ ದೇವರಲ್ಲಿ ನಮ್ಮ ಮನವಿ!!

ಪ್ರತಿಯೊಂದನ್ನು ನೇರ ನೇರಾವಾಗಿ ಮಾತನಾಡುವ ನನಗೆ ಹೇಳಬೇಕೆಂದರೆ ಸ್ನೇಹಿತರು ಕಡಿಮೇನೇ, but ಇರುವವರಲ್ಲಿ ಒಳ್ಳೆಯವರನ್ನ ಆರಿಸಿದ್ದಿನೀ ಅನ್ನೋದು ಆತ್ಮಾಭಿಮಾನ… Mostly ಸ್ವಾರ್ಥ ರಹಿತ, ಗೌರವಪೂರ್ಣ ಸ್ನೇಹವನ್ನ ಬಯಸುವುದರ ಫಲವಿರಬೇಕು!!

The so called modernization ಅಂತಾರಲ್ಲ, ಅದರ ಒಳಗೆ ನುಗ್ಗಿ ಬರಬೇಕು ಅನ್ನೋ ಆಸೆನೋ ಇಲ್ಲ ಭಾವನೇನೋ ಹುಟ್ಟೋದಂತು ನಿಜ, ಅವೆಲ್ಲ ಎಲ್ಲಿ ನನ್ನ ದಾರಿಗೆ ಅಡ್ಡ ಬರುತ್ತೋ ಅನ್ನೋ ನಿಸ್ಸಂಕೋಚ ಪ್ರೀತಿ… ಜೊತೆಗೆ ಬೇಕಿದ್ದನ್ನ ಯಾರ ಬಳಿ ಕೇಳಬೇಕು ಎಂಬುದೇ ಮೊದಲಿನಿಂದ ತಿಳಿದಿಲ್ಲ, ಆದ ಕಾರಣ ಎಲ್ಲದ್ದಕ್ಕೂ adjustment ಎಂಬ ಹಣೆ ಪಟ್ಟಿ ಅಂಟಿಸಿ recycle binಗೆ ಕಳುಹಿಸಿದ್ದೇನೆ!! ಇನ್ನು ಮುಂದೆ ಯಾರನ್ನು ಕೇಳೋ ಅವಕಾಶ ಬರೋದಿಲ್ಲ ಕಣ್ರೀ, ಯಾಕಂದ್ರೆ ನನ್ನ ಪರಿವಾರ ನನ್ನ ಕಾಲ ಮೇಲೆ ನಿಲ್ಲಿಸಿದೆ… ಅದಕ್ಕೆ ನಾನು ಅಭಾರಿ!!

ಪ್ರತಿಯೊಂದ್ದಕ್ಕೂ ಅದರದೇ ಆದ ಗೌರವವಿದೆ ಕಣ್ರೀ, ಅದನ್ನು ಕೊಟ್ಟಾಗಲೇ ಅದಕ್ಕೆ ಬೆಲೆ; ಸೃಷ್ಟಿಯ ನಿಯಮದಲ್ಲಿ ಎಲ್ಲರಿಗೂ ಸಮಪಾಲು… ಹಾಗೆ ಪ್ರತಿಯೊಬ್ಬರಿಂದ ಕಲಿಬೇಕು ಅವಾಗ್ಲೇ ನಮ್ಮ ಪರಿಪೂರ್ಣತೆಗೆ ನಾವು ಕೊಡೋ ಆತ್ಮಜಲ…

ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳಗೊಂದು ನುಡಿ ಕಲಿತು,
ವಿದ್ಯೆಯ ಪರ್ವತವೇ ಆದ, ಸರ್ವಜ್ಞ

ಎನ್ನುತ್ತಾನೆ ಸರ್ವಜ್ಞ ಮಹಾಕವಿ… ಈ ಒಂದೇ ವಿಷಯ ಜೀವನದ ಪ್ರತಿ ಘಟನೆಯಲ್ಲೂ ಪಾಠ ಕಲಿಯೋದನ್ನ ಕಲಿಸದೆ… ಆದ್ದರಿಂದ ಮನಸ್ಸಿಗೆ ಬೇಸರವಾಗೋದು ಕಡಿಮೇನೇ, ಒಂದು ವೇಳೆ ಆದರೂ ಪ್ರತಿಹೆಜ್ಜೆಯಲ್ಲೂ compromise ಮಾಡೋದು ಕಲಿಸಿದೆ ಜಗ ಜೀವನ ಪಾಠ!!

ಯಾವುದಾದರು ದಾರಿ ಅಥವಾ ಯಾರಾದ್ರು ತಪ್ಪು ಅಂತ ತಿಳಿದರೆ, ಯಾವುದೇ ಕಾರಣಕ್ಕೂ ತಲೆ ಬಾಗೋ ಮಗನೆ ಅಲ್ಲ ಕಣ್ರೀ ಈ ಹುಡುಗ… ಕಾರಣನೇ ಗೊತ್ತಿಲ್ಲ, mostly ಮೊದಲಿಂದ ಬಂದಂತಹ ದುರಭ್ಯಾಸದ ಫಲವಿರಬಹುದೇನೋ??!!

ಸೂರ್ಯ ತಾನು ಮುಳುಗುತ್ತಾನೆ ಅಂತ ಗೊತ್ತಿದ್ರು ತನ್ನ ಕೆಲಸವನ್ನ ಸಂಪೂರ್ಣವಾಗಿ ಅದೇ ತಡೆ ಇಲ್ಲದೆ ನಿಭಾಯಿಸ್ತಾನೆ, ಯಾಕಂದ್ರೆ ಮತ್ತೆ ಹುಟ್ಟಿ ಪ್ರಕಾಶಿಸುತ್ತೇನೆ ಎಂಬ ಆತ್ಮವಿಶ್ವಾಸ ಅವನಲ್ಲಿದೆ… ಹಾಗೆ ಮುಳುಗುವುದು ಒಂದು ನೋವೆಂದು ಪರಿಗಣಿಸಿದರೂ, ನಾವು ಕೂಡ ನೇಸರನಂತೆ ಆ ನೋವನ್ನು ಅನುಭವಿಸಿ, ಆ ನೋವಿನಲ್ಲೇ ಆತ್ಮವಿಶ್ವಾಸ ಪಡೆದು ಮತ್ತೆ ಉದಯಿಸುವ ಪರಿಪಾಟವನ್ನ ನಾವು ಬೆಳೆಸಿಕೊಳ್ಳಬೇಕು, ಅದಕ್ಕೆ ಆ ಸೂರ್ಯನೇ ಸಾಟಿ!!

Placement in Life!! ಬಗ್ಗೆ ಹೇಳುತ್ತ ಸ್ವಲ್ಪ ದಾರಿ ಅತ್ಮವರ್ಣನೆ ಕಡೆ ಹೊರಲಿತೇನೋ ಅನಿಸ್ತಿದೆ… ಆತ್ಮವರ್ಣನೆ ಅಹಂ ಭಾವದ ಬೀಜ ಬಿತ್ತಿದರೂ, ನಮ್ಮ ಬಗ್ಗೆ ಇರೋದನ್ನ ಹೇಳಿಕೊಳ್ಳೋದಕ್ಕೆ ಏನ್ ತಪ್ಪಿದೆ ಅಲ್ವಾ??!!

ಇಂತಿ ನಿಮ್ಮವ;
@ Triple K 🙂

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s