ಕನ್ನಡ ಭಾಷೆ-ಸಂಸ್ಕೃತಿಯ ಮೇಲೆ ಜಾಗತೀಕರಣದ ಪ್ರಭಾವ!!

ಕರ್ನಾಟಕ- ಈ ಪದದ ಅರ್ಥ ಅತಿ ವಿಶಾಲವಾದದ್ದು :)
ಕನ್ನಡ ಸಂಸ್ಕೃತಿ ಅತ್ಯಂತ ಅರ್ಥಪೂರ್ಣ  :)

ಒಂದು ರಾಜ್ಯದ ಸಂಸ್ಕೃತಿ ಆ ನಾಡಿನ ಜನಾಂಗ, ಬದುಕಿಗೆ ಭದ್ರವಾದ ಆಧಾರ, ಸಂಸ್ಕೃತಿಯನ್ನು ರೂಪಿಸಿ ಕ್ರಿಯಾಶೀಲಗೊಳಿಸುವ ಕಲಾಕೌಶಲಗಳು ಭಾಷೆ, ಸಾಹಿತ್ಯ, ಸಂಗೀತ, ಶಿಲ್ಪ ಮತ್ತು ಚಿತ್ರಕಲೆ. ಆದುದರಿಂದ ಕರ್ನಾಟಕದಲ್ಲಿ ಕಂಡು ಬರುವ ಸಂಸ್ಕೃತಿಯ ಜೀವಂತಿಕೆ ಸಮೃದ್ಧ ಸಾಮಾಜಿಕ ಜೀವನದ ಲವಲವಿಕೆ ಉತ್ಸಾಹಗಳ ಸಂಕೇತವಾಗಿದೆ!! 🙂

ಅಖಂಡ ಕರ್ನಾಟಕ
ಅಖಂಡ ಕರ್ನಾಟಕ ರಾಜ್ಯದ ಚಹರೆ, ಚಿತ್ರ ಕೃಪೆ: ಅಂತರ್ಜಾಲ

ಸಾಂಪ್ರದಾಯಿಕ ನಾಡು ವಿಶ್ವಕ್ಕೆ ತೆರೆದುಕೊಳ್ಳಲು ಜಾಗತೀಕರಣ ಅತ್ಯವಶ್ಯಕ. ಅಂದರೆ ನಾಡು ಅಭಿವೃಧ್ಧಿಯ ಪಥದಲ್ಲಿ ಸಾಗಬೇಕು. ಆದರೆ ಅಭಿವೃದ್ಧಿ ನಾಡಿನ ಸಂಸ್ಕೃತಿ, ಭಾಷೆಯ ಅಳಿವು ಉಳಿವಿಗೆ ತೊಡಕಾಗಬಾರದು.

ಜಾಗತೀಕರಣವೆಂದ ಕೂಡಲೇ ನೆನಪಿಗೆ ಬರುವುದು ಐಟಿ-ಬಿಟಿ ಮತ್ತು ಇಂಗ್ಲಿಷ್ ಭಾಷೆ. ಇವುಗಳ ನಡುವೆ ಕನ್ನಡ ಭಾಷೆ, ಅದರ ಸಂಸ್ಕೃತಿ ಅಸಡ್ಡೆ, ನಿರ್ಲಕ್ಷ್ಯಕ್ಕೊಳಗಾಗಿದೆ. ಕನ್ನಡ ಕಲಿತರೆ ಯಾವುದೇ ಉಪಯೋಗವಿಲ್ಲ ಎಂಬ ಸಿದ್ದಾಂತ ಶುರುವಾಗಿದೆ. ಕೊಡುಕೊಳ್ಳುವಿಕೆ ಸರಿನೇ, ಆದರೂ ಬರಿ ಕೊಳ್ಳುವಿಕೆಯಾದರೆ ಕಷ್ಟವಾಗುತ್ತದೆ. ಅದರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದರೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನ ಭೂತಗನ್ನಡಿಯಲ್ಲಿ ಹುಡುಕಬೇಕಾಗಿದೆ. 😦

ದೇಶ-ವಿದೇಶಗಳಿಂದ ಬರುವ ಜನ ಇಲ್ಲಿನ ಸಂಸ್ಕೃತಿಯನ್ನ ಬದಿಗೊತ್ತಿ ತಮ್ಮ ಸಂಸ್ಕೃತಿಯನ್ನ ಪಸರಿಸುತ್ತಿದ್ದಾರೆ. ಇವೆಲ್ಲದರ ನಡುವೆ ನಮ್ಮ ಸಂಸ್ಕೃತಿ ಮೂಲೆಗುಂಪಾಗುತ್ತಿದೆ. ಹೀಗೆ ಮುಂದುವರಿದರೆ ನಶಿಸುವ ಕಾಲ ಸನ್ನಿಹಿತವಾಗುತ್ತದೆ 😦  ಜನರ ಸಹ ಭಾಷೆಯಾಗಿ ಕಂಗ್ಲಿಷ್ ಹುಟ್ಟಿಕೊಂಡಿದೆ. ಜನ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ತೋರಿಸಿ ದೇಶೀ ಸಂಸ್ಕೃತಿಯನ್ನ ಮರೆಯುತ್ತಿದ್ದಾರೆ.

ಸಾಫ್ಟ್ವೇರ್ ಸಂಸ್ಕೃತಿ ಹುಟ್ಟಿಕೊಂಡಿದೆ. ಅದರ ಪ್ರಭಾವ ಹೇಗಿದೆಯೆಂದರೆ ಇಡೀ ಕಾವೇರಿ ನೀರು ಹರಿದರೂ ಸರಿ, ನಮ್ಮೂರ ಐಟಿ ಕಂಪನಿಗಳು ಆ ಊರಿಗೆ ಹೋಗದ್ದಿದ್ದರೆ ಸಾಕೆಂದು ಬೇಡಿಕೊಳ್ಳುತ್ತೇವೆ. ಭಾಷೆ, ಸಂಸ್ಕೃತಿಯ ಮೇಲಿನ ದಾಳಿಯಲ್ಲಿ ಅಕ್ಕಪಕ್ಕದ ರಾಜ್ಯದ ದರ್ಬಾರು ಕೂಡ ಒಂದು ಕಾರಣವಾಗಿ ಉಳಿದಿದೆ. ಒಟ್ಟಾರೆಯಾಗಿ ಹೇಳಬೇಕಾದರೆ ಜಾಗತಿಕರಣ ಕನ್ನಡ ಭಾಷೆ-ಸಂಸ್ಕೃತಿಗೆ ಒಂದು ಮಾಲಿನ್ಯವಾಗಿ ಪರಿಣಮಿಸಿದೆ. 😦

ಇವೆಲ್ಲದರ ಪರಿಣಾಮವಾಗಿ ಭಾರತದ ಯಾವ ಭಾಷೆಗೂ ಇಲ್ಲದಷ್ಟು ಸಂಖ್ಯೆಯ ಕಾವಲು ಸಂಸ್ಥೆಗಳು, ಸರ್ಕಾರಿ ಕೃಪಾಶಯ ಕನ್ನಡಕ್ಕೆ ಇವೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ, ಕನ್ನಡ ನಾಮಪಲಕ, ಗಡಿನಾಡ ಸಮಸ್ಯೆ, ಪ್ರಾದೇಶಿಕ ಅಸಮಾನತೆ, ಮೊದಲಾದ ವಿಷಯಗಳು ಕ್ಲಿಷ್ಟಕರ ಸಮಸ್ಯೆಗಳಾಗಿ ಪರಿಣಮಿಸಿವೆ. ಕನ್ನಡ ನಾಡಿನಲ್ಲಿ ಕನ್ನಡಕ್ಕಾಗಿಯೇ ಪ್ರತಿಹಂತದಲ್ಲೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಉಂಟಾಗಲು ಪ್ರಥಮ ಪೂರ್ವಧಾರಿತ ಕಾರಣವಾಗಿ ಜಾಗತೀಕರಣ ಬೆಳೆಯುತ್ತಿದೆ.ಇನ್ನು ಹೇಳಬೇಕೆಂದರೆ ಕನ್ನಡಿಗರು ನಿರಾಭಿಮಾನಿಯಾಗಿದ್ದಾರೆ, ಎಲ್ಲಕ್ಕಿಂತ ಸ್ವಾರ್ಥಿಯಾಗಿದ್ದಾರೆ. ಶಾಲೆಗಳಲ್ಲಿ ಕನ್ನಡ ಕಲಿಸಲು, ಅಂಗಡಿ, ಕಚೇರಿಗಳಲ್ಲಿ ಕನ್ನಡ ನಾಮಪಲಕ ಹಾಕಲು, ನಮ್ಮ ನಾಡಿನ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ಪಡೆಯಲು ಹೆಣಗಾಡಬೇಕಾಗಿದೆ. ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಪರ ಕೆಲಸಗಳನ್ನು ಸಕ್ರಿಯವಾಗಿಸಲು ಇಲಾಖೆಗಳು ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. 😉

ವಿಧ್ಯಾವಂತರ ವಲಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಮೂಡಿಸಬೇಕಾಗಿದೆ. ಕನ್ನಡ ಜನರ ಉದ್ಧಾರಕ್ಕಾಗಿ ಗಮನ ಹರಿಸಿದರೆ ಭಾಷೆ, ಸಂಸ್ಕೃತಿಯ ಅಭಿವೃದ್ಧಿ ಸಾಧ್ಯ. ನಮ್ಮ ನಾಡಿನ ನೆಲ, ಜಲ, ಸಂಪತ್ತನ್ನು ಬಳಸುವ ಖಾಸಗಿ ಸಂಸ್ಥೆಗಳು ಕನ್ನಡ ಮತ್ತು ಕನ್ನಡಿಗರಿಗೆ ಹೆಚ್ಚಿನ ಮಾನ್ಯತೆ ನೀಡಬೇಕು. ಖಾಸಗಿಯವರಿಗೆ ನಮ್ಮ ನಾಡುನುಡಿಯ ಬಗ್ಗೆ ಗೌರವ ಬೆಳೆಸಿಕೊಳ್ಳುವ ಮನವರಿಕೆ ಮಾಡಬೇಕಾದ ಅಗತ್ಯವಿದೆ. ಕನ್ನಡದಿಂದ ಏನು ಪ್ರಯೋಜನ ಎಂದು ಹೀಗೆಳೆಯುವ ಮಂದಿಗೆ, ಕನ್ನಡ ಕಲಿತರೂ ಚೆನ್ನಾಗಿ ಬದುಕಬಹುದೆಂದು ತೋರಿಸಿ ಆತ್ಮವಿಶ್ವಾಸ ತುಂಬಬೇಕು. 🙂

ಇಂತೆಲ್ಲ ಕಾಳಜಿ ವಹಿಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. ಇನ್ನು ಕಾಲ ಮಿಂಚಿಲ್ಲ. ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತರಾದ ಕನ್ನಡಿಗರಿಗೆ ಎಚ್ಚೆತ್ತುಕೊಂಡು ಸರಿದೂಗಿಸುವುದು ದೊಡ್ಡ ಕಾರ್ಯವೇನ್ನಲ್ಲ. ಏಕೆಂದರೆ ಕರ್ನಾಟಕ ವಿಶಾಲವಾದುದು, ಅದರ ಸಂಸ್ಕೃತಿ ಅರ್ಥಪೂರ್ಣವಾದುದು, ಕನ್ನಡ ಭಾಷೆ- ಪ್ರೀತಿ, ಪ್ರತಿಭೆ ಮತ್ತು ಸೌಂದರ್ಯದ ಸಮ್ಮಿಲನ, ಅದರ ಸಾಹಿತ್ಯ- ಸೌಂದರ್ಯದ ಜೀವಂತ ಅಭಿವ್ಯಕ್ತಿ. 🙂

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನುಡಿ- ಚಿರಂತನ ಚೂತನವನ ಚೈತ್ರ!!

ಇಂತಿ ನಿಮ್ಮವ;
@ Triple K 🙂

(ಮೊದಲ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ಆಚಾರ್ಯ ವಿಧ್ಯಾಸಂಸ್ಥೆಯ ಭಾಗವಾದ ಪದವಿಪೂರ್ವ ಕಾಲೇಜಿನವರು ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗೆ ನಾ ಬರೆದ ಲೇಖನ)

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s