ನೆನಪಿನ ಓಲೆ…

ಪರಂಪರೆಯ ನಡೆಯಲ್ಲಿ, ನುಡಿಯಲ್ಲಿ, ನಿಲುವಲ್ಲಿ, ನೋಟದಲ್ಲಿ ಬದುಕಿನ ವೈಭವದ ಹೊಳಪನ್ನು ಹಾಯಿಸುವ ಕುಸುರಿಯ ಅಪ್ಪಟ ಮಾರ್ಗ ವ್ಯಕ್ತಿತ್ವದ ಅರ್ಥವತ್ತಾದ ಸುರಭಿ. 🙂

ನಿನಗಾಗಿ

ಬದುಕಿನ ಭಾವದ ಪದರ ಪದರವನ್ನು ಚದುಚದುರಿಸಿ ಬಿಡಿಬಿಡಿಸಿ ಭಾವದ ರಸತಾಳದ ಆಳದವರೆಗೂ ಕೊಂಡೊಯ್ದು ಪ್ರೀತಿಯ ಸಾಗರದಲ್ಲಿ ಮಜ್ಜನ ಮಾಡಿಸಿ, ಎದೆಭಾರ ಇಳಿಸಿ, ಹಗುರಾಗಿಸಿ ತೇಲಿಸುವ ಭಾವಯಾನ ನಿನ್ನ ಜೊತೆಯಾಗಿನ ಪಯಣ. 🙂

ಚಿಟ್ಟೆಯ ರಂಗಿನ ರೆಕ್ಕೆಯಂತಹ ಚಂಚಲ ಮನಸ್ಸು ನನ್ನದು… ಅದು ಹೇಗೆ ನಿನ್ನ ಕಣ್ಣ ಬೇಲಿಯ ಕಾವಲಿಗೆ ಸಿಕ್ಕಿ ಹೋದೆನೋ..??? ಮೊದಲ ಹೆಜ್ಜೆಯ ಆಂಗಿಕದಲ್ಲೇ ನನ್ನ ಅಂತರಂಗವನ್ನು ಆವರಿಸಿಕೊಂಡ ಕಲಾಕೌತುಕದ ಸುರಭಿ. 🙂

ಆ ನಿನ್ನ ಕಣ್ಣು ಕಮಲ ಅರಳಿದಂತೆ, ನಗು ಬೆಳದಿಂಗಳಂತೆ, ಮಾತು ಮಂಜಿನ ಮಳೆಯಂತೆ, ವದನ ಹುಣ್ಣಿಮೆಯ ಚಂದ್ರನಂತೆ, ಆಂತರ್ಯ ಬೆಳದಿಂಗಳ ಹಾಲಿನಂತೆ, ನಡೆ ತಿಲಿಗಾಲಿಯ ತೇವ ಆತ್ಮ ತಾಕಿದಂತೆ, ಆ ಹಾವ-ಭಾವ ಹಾಲು-ಸಕ್ಕರೆ ಮೆಲ್ಲಿದಂತೆ. 🙂

ಮುಮ್ಮುಂದಿನದು ಭಾವಪ್ರವಾಹದ ಜೀವವೈಭವ:  ಅನಿರ್ವಚನೀಯವಾದ ಭಾವವನ್ನು ನನ್ನಲ್ಲಿ ಉಕ್ಕಿಸಿದ ಕಲಾಕಾರಂಜಿ; ನನ್ನ ಅಪರಂಜಿ… ನನ್ನನ್ನು ಕಾಡುವ ಪ್ರತಿಯೊಂದು ಪ್ರಶ್ನೆಗಳಿಗೂ ಆಹ್ಲಾದಕರವಾದ, ಭಾವಪೋಷಕವಾದ ಲಯಗಾರಿಕೆಯ ಸಮ್ಮೋಹಕವಾದ ಉತ್ತರ ನೀನು. 🙂

ಆ ನಿನ್ನ ಮುಗುಳ್ನಗೆಯಿಂದ ಭಾವವು, ಭಾವದಿಂದ ಜೀವವೂ ನನ್ನಲ್ಲಿ ಅನ್ಯೋನ್ಯವಾಗಿ ಉತ್ ಸ್ಪೂರ್ತಗೊಂಡಿದೆ… ಆ ನಿನ್ನ ತನ್ಮಯತೆ ಸಮೃದ್ಧವಾದ ಅವಧಾನಶೀಲತೆ. 🙂

ನೀನು ಸ್ಪೂರ್ತಿಯ ಚಿಲುಮೆ, ಭಾವನೆಗಳ ಮಿಲನ

ಪ್ರೀತಿ, ಪ್ರತಿಭೆ ಮತ್ತು ಸೌಂದರ್ಯದ ಸಮ್ಮಿಲನ

ಬದುಕಿನ ಭಾವಗಳ ಜೀವಂತ ಅಭಿವ್ಯಕ್ತಿ

ಚಿರಂತನ ಚೂತನವನ ಚೈತ್ರ

ಚೈತನ್ಯ-ಶಾಂತಿಯ ಸಾಕ್ಷಾತ್ಕಾರ

ಬತ್ತಿಹೋದ ಬಾವಿಯಂತಿದ್ದ ನನ್ನ ಬದುಕಿಗೆ, ನೀರಿಲ್ಲದ ಮೀನಿನಂತೆ ವಿಲವಿಲ ಒದ್ದಾಡುತಿದ್ದ ನನ್ನ ಮನಸಿಗೆ ಪ್ರೀತಿಯ ನೀರೆರೆದು ನನ್ನಲ್ಲಿ ನಿಜವಾದ ಜೀವನದ ಅರ್ಥವನ್ನು ಕಳಿಸಿದ ಗುರು ನೀನು. 🙂

ಇಂತಿಪ್ಪ ಭಾವಗಳ ಅನಂತ ಯಾತ್ರೆಯಲ್ಲಿ ನನ್ನನ್ನು ಕರೆದೊಯ್ಯುವ ನಿನ್ನ ಕಣ್ಣಿನ ಭಾವಾಭಿವ್ಯಕ್ತಿಯ ಸಾಮರ್ಥ್ಯ ಮೊಗೆದಷ್ಟೂ ಜಿನುಗುವ ಅಂತರ್ಜಲ… ನನ್ನ ಜೀವಜಲ ಮತ್ತು ಆತ್ಮಬಲ… ಯಾಕೆಂದರೆ ಈ ಬದುಕೆಂಬ ಮರಳುಗಾಡಿನ ನನ್ನ ಓಯಾಸಿಸ್ ನೀನು. 🙂

ಇಂತಿ  ನಿನ್ನ  ಪ್ರೀತಿಯ;
ಅನಾಮಿಕ 🙂

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s