ಯಾರದೋ ನೆನಪಿನಲ್ಲಿ ♥

ಆ ನಗು ಬೆಳದಿಂಗಳಂತೆ,
ಮಂಜಿನ ಮಳೆಯಂತೆ,
ಹುಣ್ಣಿಮೆ ಚಂದ್ರನಂತೆ

ಯಾರು ನೀನು?? ನನಗೂ ನಿನಗೂ ಏನು ಸಂಬಂಧ?? ನಾನು ಯಾಕೆ ನಿನ್ನ ಅತಿಯಾಗಿ ಹಚ್ಚಿಕೊಂಡಿದ್ದೇನೆ?? ನನಗೆ ತಿಳಿಯದ ಹಾಗೆ ನೀನು ನನಗೆ ಹೇಗೆ ಆತ್ಮೀಯಳಾದೆ??!! ಯಾವ ಊರು, ಏನು ಎತ್ತ, ಯಾವುದು ತಿಳಿಯದೆ ನನ್ನನೇಕೆ ಆವರಿಸಿದ್ದಿಯಾ?? ನಿಜ ಹೇಳು, ಯಾರು ನೀನು??

ಕುಂತರೂ, ನಿಂತರೂ, ನಿದ್ರಿಸಿದರೂ ಕಾಡುತ್ತಿರುವ ನಿನ್ನ ನೆನಪಿಗೆ ಸಾವಿರ ಸಾವಿರ ವಂದನೆಗಳು… ನೀ ನನ್ನಿಂದ ದೂರಾದ ದಿನದಿಂದ ನನ್ನ ನೋವುಗಳಿಗೆ ಭಾವನೆಗಳ ಭಾಷೆ ಬರೆದುದೇ ಈ ನಿನ್ನ ನೆನಪುಗಳು!!!

ಆದರೂ ಜಗತ್ತಿನೊಂದಿಗೆ ಮಾತುಗಳು ಮುಗಿದು ಹೋಗಿ, ಶಾಶ್ವತ ಮೌನವೊಂದು ನನ್ನೊಳಗೆ ಕಾಡುತ್ತಿತ್ತು… ಆದ ಕಾರಣವೇ ನಿನ್ನನ್ನು ಮರೆಯೋದಕ್ಕೆ ತಯಾರಾದೆ. 😦

ಮೊದಮೊದಲು ನಿನ್ನನ್ನು ಸುಲಭಕ್ಕೆ ಮರೆತು ಬಿಡಬಹುದೆಂದುಕೊಂಡೆ… ಅದಕ್ಕಾಗಿ ನನ್ನದಲ್ಲದ ನಗು ಧರಿಸಿದೆ… ನನ್ನೊಳಗೆ ಅರಳದ ಮಾತುಗಳನ್ನಾಡಿದೆ… ದಾರಿ ಇಲ್ಲದ ಕಡೆ ನಡೆಯತೊಡಗಿದೆ… ಆದರೆ ಅವೆಲ್ಲ ದಾರಿಗಳು ನಿನ್ನ ಸಮ್ಮುಖಕ್ಕೆ ತಂದು ನಿಲ್ಲಿಸಿದವು 🙂

ನೀನಿಲ್ಲದ ಬದುಕು ಎಷ್ಟೊಂದು ಕೃತಕ ಗೆಳತಿ?? ನಿನ್ನನ್ನು ಮರೆಯುತ್ತೇನೆ ಅಂತ ಹೊರಡೋದೇ ಶುದ್ದ ಸುಳ್ಳು, ಅಪ್ಪಟ ಆತ್ಮವಂಚನೆ. 😉

ಕಡಲಲ್ಲಿ ಹುಟ್ಟುವ ಅಲೆ ದಡ ದಾಟಲಾರದೆ ಅಸಹನೆಯಿಂದ ಕದಲುತ್ತಾ, ನಿಸ್ಸಹಾಯಕವಾಗಿ ವಾಪಸ್ಸ್ ಕಡಲಿನೊಳಗೆ ಲೀನವಾದಂತೆ, ನಾನು ಮತ್ತೆ ಮತ್ತೆ ನಿನ್ನ ನೆನಪುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗೆಲ್ಲ ನಿನ್ನ ನೆನಪನ್ನುಂಡು, ನೆನಪ್ಪನ್ನೇ ಹಾಸಿ, ನೆನಪನ್ನೇ ಹೊದ್ದು ಮಲಗಿ, ನೆನಪುಗಳನ್ನೇ ಕನವರಿಸಿ ನೊಂದುಕೊಂಡಿದ್ದೇನೆ… ನಿನ್ನ ನೆನಪಿನಿಂದ ಬದುಕಲು ಕಲಿತಿದ್ದೇನೆ… ನಿನ್ನ ನೆನಪುಗಳಿಗೆ ನನ್ನ ಎದೆಯ ಅಂತರಂಗದ ಬಾಗಿಲು ತೆರೆದುಬಿಟ್ಟಿದ್ದೇನೆ 😦

ಹಳೆಯ ಹಳಿಯ ಮೇಲೆ ಸವೆದು ಹೋದ ರೈಲು ನವೆಯುತ್ತಾ ಸಾಗಿ ಅದೇ ಹಳೆಯ ನಿಲ್ದಾಣಗಳೆಂಬ ಏಕತಾನತೆಯಲ್ಲಿ ಕಳೆದು ಹೋಗುತ್ತಿದ್ದ ನನ್ನ ಬದುಕಿನ ಹಳಿ, ರೈಲು, ನಿಲ್ದಾಣಗಳನ್ನು ಭಾವನೆಗಳೆಂಬ ಜೀವ ಕಟ್ಟಿ ಹೊಸದಾಗಿ ನಿರ್ಮಿಸಲು ಪ್ರೇರೇಪಿಸುವ  ನಿನ್ನ ನೆನಪಿಗೆ ಹೃದಯಪೂರ್ವಕ ವಂದನೆಗಳು 🙂

— ಯಾರದೋ ನೆನಪಿನಲ್ಲಿ ♥

Advertisements

Published by

Triple K

ಹಾಗೇ ಸುಮ್ಮನೇ; ಚೂರು ಮಾತು, ಜಾಸ್ತಿ ಹುಡುಗಾಟ, ಚೂರು ಕೋಪ, ಜಾಸ್ತಿ ಪ್ರೀತಿ, ಸಂದರ್ಭಕ್ಕೆ ಸರಿಯಾಗೋ ಅಷ್ಟು ಗಾಂಭೀರ್ಯ !! ಇದೆಲ್ಲದರ ಜೊತೆಗೆ ದೊಡ್ಡ ಕನಸು. ಅದರ ಮಧ್ಯೆನೇ ಜೀವನದ ಸಣ್ಣ - ಪುಟ್ಟ ಅನುಭವಗಳನ್ನು ದೊಡ್ಡ ಖುಷಿಯಿಂದ ಆಚರಿಸೋ ಸ್ನೇಹಜೀವಿ ♥ ಒಟ್ಟಿನಲ್ಲಿ ಬದುಕಿನ ಬಯಲು ದಾರಿಯ ಅಲೆಮಾರಿ, ಮತ್ತೆ ಪ್ರತಿಕ್ಷಣವೂ ಅದರ ಗುರುವಿನ ವಿಧ್ಯಾರ್ಥಿ! ಹೀಗೆ ಅನ್ನಿಸಿದ್ದು, ಕಂಡಿದ್ದನ್ನ ಗೀಚೋ ಅಭ್ಯಾಸ ♥ ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದ್ದು ಅಂತ ಅದಕ್ಕೊಂದು ಪುಟ್ಟ ವೇದಿಕೆ ಕಲ್ಪಿಸ್ತಾ ಇದೀನಿ. :) ಅದುವೇ “ಅಪಧಮನಿ”, ಭಾವದ ಬದುಕಿನ ಬಯಲು ದಾರಿ ಅಲೆಮಾರಿಯ ಪ್ರಯಾಣದ ಹಾದಿ!!

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s