ಓ ಕೇಳೆ ಗಿಳಿ ಮರಿ |

ನಿನ್ನಾಸೆಯಂತೆ ನಾನು ಬಾಳುವೆ
ನಿನ್ನ ಅಣತಿಯಂತೆ ನಾನು ಬದುಕುವೆ ||

ಆದರಿಂತೆನ್ನುವುದು ಮಧ್ಯವಾಸಿಗಳ ಬಲೆಗೆ ನಾ ಸಿಲುಕಿರುವೆನು
ಸ್ವಾಭಿಮಾನಿಕೆ ನನ್ನ ನಿನ್ನ ಅಸ್ತ್ರವಾಗಿರುವುದು, ನಾನೆನ್ನ ಮಾಡುವುದು
ಸ್ವಾರ್ಥ ನಿಸ್ವಾರ್ಥತೆಯ ಜಗದಲ್ಲಿ ನಾನು ಬಾಳುತ್ತಿರುವೆನು ||

ನಾನು ನನ್ನ ಕನಸಿನ ಲೋಕದಲ್ಲಿ,
ಆ ಕನಸನ್ನು ನನಸಾಗಿಸುವ ಪಥದಲ್ಲಿ ಸಾಗಿರುವೆನು
ಲೋಕದ ಬಾಯಿಗೆ ಸಿಕ್ಕಿರುವಂತೆ ಕಾಣುವ ಜೀವನ,
ಅದಕ್ಕಾಗಿ ನಾ ತೊಡಬೇಕು ಶಸ್ತ್ರವಿಲ್ಲದ ಯುದ್ಧ ಪಣ ||

ಓ ಕೇಳಮ್ಮ ಗಿಳಿ ಮರಿಯೇ
ನವ ಬೆಳಕಿನ ಹೊಸ ವರುಷಗಳನು ನಾ ಕಂಡೆ
ದಶ ವರುಷಕೆ ಸಿಲಿಕಾನ್ ವ್ಯಾಲಿಗೆ ನಾ ಬಂದೆ
ಸುಲಭ ಜೀವನವೆಂದು ತಿಳಿದ ನನಗೆ
ವ್ಯಾಲಿಯ ನೋಡಿದ ಮೇಲೆ ನಾನರಿತೆ ಲೋಕಸತ್ಯ ||

ಲೋಕ ಸತ್ಯದ ಅರಿವು ನನ್ನನ್ನು
ಒಳ್ಳೆಯ ದಾರಿಗೆ ಕೊಸರಿಸಿತು
ವ್ಯಾಲಿಯ ಸ್ಪರ್ಧಾತ್ಮಕತೆ ಎಚ್ಚರಿಸಿತು ನನ್ನ
ಎಲ್ಲಿದ್ದೆನೋ ಅಲ್ಲೇ ಬಿದ್ದಿದ್ದರೆ ನಾನಾಗುತಿದ್ದೆ- ಬಾಡಿದ ಹೂವು
ಎಲ್ಲಿಂದಾನೋ ಇಲ್ಲಿಗೆ ಬಂದಿರುವುದು
ನಾ ಅರಳುವ ಹೂವು ||

ಜಗಜೀವನ ಪಾಠ ಕಲಿಸಿದ ಪ್ರತಿಯೊಂದಕ್ಕೂ ನಮನ
ನಮನ ನಮನ ನಮನ ನಮನ
ನಮನ ಸಿಲಿಕಾನ್ ವ್ಯಾಲಿಗೆ
ನಮನ ವ್ಯಾಲಿಯ ಜೀವನಕ್ಕೆ
ನಮನ ನನ್ನ ಮುದ್ದಿನ ಗಿಳಿ ಮರಿಗೆ
ನಿನ್ನಾಸೆಯಂತೆ ನಾನು ಬಾಳುವೆ
ನಿನ್ನ ಅಣತಿಯಂತೆ ನಾನು ಬದುಕುವೆ ||

@ Triple K 🙂

Advertisements

ನಿಮ್ಮ ಅನಿಸಿಕೆ ತಿಳಿಸಿ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s